ಆಫೀಸಿನಲ್ಲಿ ಕೂತು ಕೀಬೋರ್ಡ್ನ ಠಕ ಠಕ ಟಂಕಿಸುತ್ತಾ ಬರೆದ Java ಕೋಡ್ ಬೇಕಾದಂತೆ ಕೆಲಸ ಮಾಡದಿರಲು ಸುಸ್ತಾಗಿ ಸಮಯ ನೋಡಿದರೆ 4 ಘಂಟೆ, ಇಂದು ಶುಕ್ರವಾರ ಊಟಿಗೆ ಬೈಕ್ ರೈಡ್ ಪ್ಲಾನ್ 15 ದಿವಸ ಮುಂಚೆಯೇ ಆಗಿತ್ತು. ಅದರ ನೆನಪಿನಲ್ಲೆ laptop shutdown ಮಾಡಿ ಮನೆಯ ಕಡೆ ಹೊರಟೆ.
ಮನೆಯಲ್ಲಾಗಲೇ ನನ್ನವಳು ಆಫೀಸಿನಿಂದ ಬಂದು ಪ್ರಯಾಣದ ತಯಾರಿಯಲ್ಲಿ ತೊಡಗಿದ್ದಳು. ಹಾಗೆಯೇ ಅವಳ ಕೆನ್ನೆಯನ್ನು ಚುಂಬಿಸಿ ನಾನು ಫ್ರೆಷಪ್ ಆಗಲು ಬಾತ್ರೂಮ್ ಕಡೆ ಹೋದೆ. ಹಾಗೆಯೇ ಮುಖ ತೊಳೆಯುತ್ತಾ ನೆನಪಿನ ಬುತ್ತಿ ತೆರೆದುಕೊಂಡಿತು.
ಯಾವುದೋ ಚಾಣಾಕ್ಷ ಶಿಲ್ಪಿ ತನ್ನ ಜೀವನ ಕಾಲವನ್ನೇ ಮುಡಿಪಾಗಿಟ್ಟು ಕೆತ್ತಿ ಕೆಡೆದಂತಹ ಮುಖಾರವಿಂದ, ಕ್ಷೀರಸಾಗರದಲ್ಲೇ ಅದ್ದಿ ತೆಗೆದಂತಹ ಮೈಬಣ್ಣ, ಬೀಸುವ ಗಾಳಿಗೆ ಆಚಿಂದೀಚೆ ಹೊಯ್ದಾಡುವ ಕೇಶವೃಕ್ಷ, ಇದೆಲ್ಲಾ ಸಾಲದೆಂಬತೆ ಹರಳುಗಳ ರಾಶಿಯಲ್ಲೇ ಅದ್ದಿ ತೆಗೆದ ಅವಳುಟ್ಟ ಆ ಗುಲಾಬಿ ಬಣ್ಣದ ಉಡುಗೆ, ಭ್ರೂಮಧ್ಯದಲ್ಲಿ ಮಿನುಗುವ ತಾರೆಯಂತಹ ಬಿಂದಿ. ಇಷ್ಟೊಂದು ಶೃಂಗಾರಭರಿತವಾಗಿ ಗರಿಬಿಚ್ಚಿದ ನವಿಲಿನಂತೆ ಅವಳು ಬರುತ್ತಿರಲು ನೋಡಿದ ಹುಡುಗರೆಲ್ಲಾ ಸ್ತಭ್ದರಾಗಿ ಅವಳನ್ನೆ ನೋಡುತ್ತಲೇ ಇದ್ದರು, ಅದರಲ್ಲಿ ನಾನೂ ಒಬ್ಬ. ಇವಳನ್ನು ಕೈ ಹಿಡಿದವನೆ ಧನ್ಯ ಎಂದಿತ್ತು ಮನಸ್ಸು.
ಇಂದು ಅವಳೇ ನನ್ನ ಬಾಳಸಂಗಾತಿ. ಮದುವೆಯಾಗಿ ಇಂದಿಗೆ ವರುಷವಾಯಿತು. ಮೊದಲನೇ ವರ್ಷದ ಸಂಭ್ರಮ ಸವಿಯಲು ಊಟಿಗೆ, ಅದೂ ನನ್ನ ಇಷ್ಟದ ಬೈಕ್ ರೈಡ್ ನಲ್ಲಿ ಅವಳೊಂದಿಗೆ ಪಯಣದ ಸಿದ್ಧತೆ ನಡೆದಿದೆ. ಮದುವೆ ಆದ ಹೊಸತರಲ್ಲಿ ನನ್ನ ಬೈಕ್ ಹಿಂದೆ ಕೂರಲು ಹೆದರುತ್ತಿದ್ದ ಅವಳು ಇಂದು ಬುಲೆಟ್ ರೈಡರ್, ಆ ಸಂಪೂರ್ಣ ಕೀರ್ತಿ ಮತ್ತು ಅದಕ್ಕಿಂತ ನೂರಾರು ಪಟ್ಟು ಹರುಷ ನನ್ನದು.
ಮುಂಜಾನೆಯ ಮಂಜಿನಲ್ಲಿ ಬೈಕ್ ನಲ್ಲಿ ಬಿಗಿದಪ್ಪಿ ಹೊರಟ ಈ ಜೋಡಿಹಕ್ಕಿಗಳನ್ನು ತಿರು ತಿರುಗಿ ನೋಡುವ ಜನರ ಮುಖವನ್ನು ನೋಡಿದಾಗಲೇ ಗೊತ್ತಾಗಿದ್ದು ಸ್ವರ್ಗಕ್ಕೆ ಕಿಚ್ಚು ಹಚ್ಚುವುದು ಎಂದರೆ ಇದೇ ಎಂದು. ( ಸ್ವಗ೯ಕ್ಕಲ್ಲದಿದ್ದರೂ ನೋಡುವ ಜನರ ಹೊಟ್ಟೆಗೆ).
"ವೀಕೆಂಡ್ ಬಂತು ಅಂದ್ರೆ ಸಾಕು ರಾತ್ರಿಯೆಲ್ಲಾ ಕುಡಿದು ಗಲಾಟೆ ಮಾಡ್ತೀರಾ, ಹೀಗೆ ಆದ್ರೆ ರೂಮ್ ಖಾಲಿ ಮಾಡಿಸ್ತೀನಿ" ಅಂತ ಯಾರೋ ಕೂಗೋದ ಕೇಳಿ ಕಣ್ಣು ಬಿಟ್ಟು ನೋಡಿದರೆ ಅಯ್ಯೋ ಇಷ್ಟೊತ್ತು ಕಂಡದ್ದೆಲ್ಲಾ ನಿನ್ನೆ ರಾತ್ರಿ ಫುಲ್ ಬಾಟಲ್ ಇಫೆಕ್ಟ್. ಥೂ ಅಂತ ನನ್ನ ರೂಮ್ ಮೇಟ್ಗೆ ಬೈಕೊಂಡು ನಾಷ್ಟಾ ಮಾಡೋಕೆ ಹೋದ್ವಿ.
I believe that only for honest and good hearted people what ever they dream that will come true.....and they get whatever they want ....you will be one among them so your all dreams will come true.... That time we will be not watching your pair but we will be riding with you ..
ReplyDeleteಕನಸುಗಳ ರಾಶಿ ಕನಸು ನನಸಾಗುವ ತನಕ, ಅಲ್ಲಿಯವರೆಗೂ ನಡೆಯಲಿ ಕನಸು ಕಾಣುವ ತವಕ.
ReplyDelete