Monday, February 13, 2017

ಪ್ರೀತಿಯ ದಿನ

ನಿನ್ನ ಮುಗುಳ್ನಗು ನೋಡುವ ಕಾತರದಲಿ ಕಾದಿದೆ ನನ್ನ ಮನ
ನಿನದೆ ಪಾರಾಯಣದಲಿ ಕಳೆದು ಹೋಗುತಲಿದೆ ನನ್ನ ದಿನ
ಇಂದೇನೋ ಪ್ರೀತಿಯ ದಿನ ಆಚರಿಸುವರು ನಮ್ಮ ಜನ
ಒಮ್ಮೆಯಾದರೂ ನೆನಪಾಗಬಾರದೇ ನಿನ್ನ ಮನಕೆ ನನ್ನ ಮನ
ಆದರೇನಂತೆ ನಿನ್ನ ಮನಕೆ ಮುಡಿಪು ನನ್ನ ಈ ಹುಚ್ಚು ಮನ
ನಲ್ಮೆಯ ಶುಭಾಶಯಗಳು ನನ್ನ ನಲ್ಲೆಗೆ  ಪ್ರೀತಿಯ ಈ ದಿನ

No comments:

Post a Comment